A Soldier of Art

Wednesday, October 11, 2006

ನಾನು -ನನ್ನ painting classu

"ನಾನು -ನನ್ನ painting" class ಅನ್ನೋ ಬದ್ಲು "ನಾನು - ನನ್ನ painting" ಅಂತ title ಇಟ್ಟು ಏನಾದ್ರು ಬರ್ಯೋಣ ಅಂತಿದ್ದೆ... ಆದ್ರೆ ಅವಾಗ ನೀವ್ಯಾರೂ ಈ postನ ಓದೋದಿರ್ಲಿ, ಇದ್ರು ಕಡೆ ತಲೆ ಹಾಕೂ ಮಲ್ಗಲ್ಲ ಅನ್ನೋದು ಗೊತ್ತಾಗಿ[in fact ಅದನ್ನ realization ಅಂತಾರೆ] ಸ್ವಲ್ಪ safer title ಇಟ್ಟಿದೀನಿ... title ಅಷ್ಟೇ ಇಟ್ಟಿದೀನಿ ಬರ್ದಿರೊದು ನನ್ನ painting ಬಗ್ಗೆನೇ ಅಂತ ಗಾಭ್ರಿ ಆಗ್ಬೇಡಿ....

ನನ್ painting class ಬಗ್ಗೆನೇ ಹೇಳ್ತಿನಿ ಬಿಡಿ.. ನನ್ನ ಕೆಲವು enthusiastic friendsಗಳ - ಶೈಲೇದ್ರ, ಕಿಶೋರ,ಸದಾನಂದ- ದಯೆಯಿಂದ ನಾನೂ painting classಗೆ ಸೇರ್ಕೊಂಡೆ..ಎಲ್ಲಿ ಅಂತೀರ..ನಮ್ಮ "ಚಿತ್ರಕಲಾ ಪರಿಷತ್" ಅಲ್ಲಿ...ಅದು ಯಾವ ಗಳ್ಗೆಲಿ ಸೇರ್ಕೊಂಡ್ನೋ ಪಾಪ-- ಇಲ್ಲಿ ಪಾಪ ನಾನೋ,ಚಿತ್ರಕಲಾ ಪರಿಷತ್ ಅವ್ರೋ ಅಥ್ವಾ ನನ್ನ inspire ಮಾಡಿದ ನನ್ನ ಬಡಪಾಯಿ friendಸೊ ಅಥ್ವಾ ಇನ್ಯಾರೋ ಅನ್ನೋದು ನೀವೇ decide ಮಾಡ್ಕೊಬೇಡಿ.. ನಾನೇ ಹೇಳ್ತೀನಿ...ನನ್ನ ಕಥೆನ, ನನ್ನ ವ್ಯಥೆನ...... so ಕಥೆ - ವ್ಯಥೆ ಅಂತೆಲ್ಲಾ ಅಂದಿರೊದ್ರಿಂದ ನಿಮ್ಗೆ ಗೊತ್ತಾಗಿರ್ಬೋದು ನಾನೇ ಪಾಪ ಅಂತ...anyway ಅದು ನನ್ನ ಅಭಿಪ್ರಾಯ...ಈಗಿನ್ ಕಾಲದಲ್ಲಿ ಯಾರ್ opinion ಕೂಡ "important ಅಲ್ಲ "ಅನ್ನೋ ಹಾಗಿಲ್ಲ... ಯಾವ್ದೂ ತಪ್ಪು ಅನ್ನೋ ಹಾಗಿಲ್ಲ..."nothing is absolute" ಅನ್ನೋ ಒಂದು sentence ಹಿಡ್ಕೊಂಡು ಎಲ್ಲಾದನ್ನೂ justify ಮಾಡ್ಕೊಬೋದು....ಒಬ್ಬ rapist ಕೂಡ ಅವನ ಸ್ಥಾನದಲ್ಲಿ correct ಅಂತ ಹೇಳ್ಬೋದು post modernno ಅದೇನೋ philosophy ಪ್ರಕಾರ ಅಂತ ಕೆಲವು "ಬುದ್ದಿವಂತ ಬುದ್ದಿಜೀವಿ"ಗಳು ಹೇಳಿರೋದನ್ನ ಕೇಳಿದೀನಿ.... ಅಯ್ಯೋ "ಇನ್ನೇನು ಕಾದಿದ್ಯೋ ದೇವ್ರೇ" ಅಂತ ಅಂದ್ಕೊಂಡ instances ಅದೆಷ್ಟೋ....ಬಿಡಿ ಅದೆಲ್ಲಾ ಈಗ್ಯಾಕೆ.....ನನ್ನ painting classಗೆ ವಾಪಸ್ ಬರೋಣ....


painting ಎಲ್ಲಾ ನನ್ನ "cup of tea" ಅಲ್ಲ ಅಂತ ನನ್ ಮಂಕ್ ಬುದ್ಧಿಗೆ ಹೊಳೀಬೇಕೋ ಬೇಡ್ವೋ....ಸುಮ್ನೆ ಯಾರೋ ಹೋದ್ರು ಅಂತ ನಾನೂ ಅವ್ರ್ಜೊತೆ [ಹಿಂದೆ ಅಲ್ಲ ಜೊತೆಗೆ] ಹೊಟೋದೆ...ಅಲ್ಲಿ ಎನೋ - ಆಥರದ್ brush ತೊಗೋಳಿ ಈಥರದ್ colour ತೊಗೋಳಿ ಮತ್ತೊಂದು ಥರದ್ book ತೊಗೋಳಿ, ಅದೂ, ಇದೂ ಅಂತ ಒಂದೇ ಸಮ ಹೇಳ್ದ್ರು...ಸರಿ ನಾನೂ ಗುರುಗಳ್ ಮಾತೇ ಮಾತು ಅಂತ ಹೋಗಿ ಅದೇನೋ numberಗಳ್ದು brushಗಳು ಅದೂ ಇದೂ ಎಲ್ಲಾ ತೊಗೊಂಡೆ... ಅವ್ರ್ಗೇನು ಗೊತ್ತು ನಾನ್ ಯಾವ್ number brushಅಲ್ಲಿ paint ಮಾಡುದ್ರುನೂ ಒಂದೇ result ಅಂತ..
number change ಆದ್ರೆ mostly ನಾವ್ ಎಳ್ಯೊ lineದು widtho ಮಣ್ಣೋ ಮಸಿನೋ change ಆಗ್ಬೇಕು technically speaking... ಆದ್ರೆ ನಾನ್ ಎಳೀತಾಇದ್ದದ್ರಲ್ಲಿ ಅಂತ difference ಏನೂ ಇರ್ತಿರ್ಲಿಲ್ಲ ಅಂದ್ಕೊಂಡಿದೀನಿ....ಸುಮ್ನೆ waste ಆ brushಗಳೆಲ್ಲಾ ನನ್ context ಅಲ್ಲಿ... in fact ಎಲ್ಲಾ[colour book etc etc] waste ನನ್ context ಅಲ್ಲಿ....

ಸರಿ ಹಂಗೂ ಹಿಂಗೂ ಹೋಗಕ್ಕೆ ಶುರು ಮಾಡ್ದೆ...ಅವ್ರು ಏನೂ interesting ಆಗಿ ಹೇಳ್ಕೊಡ್ಲಿಲ್ಲ..atleast ನನಗಂತೂ ಹಂಗ್ ಕಾಣ್ಸ್ಲಿಲ್ಲ.... ಎನೋ ಅವ್ರೇ ಎನೋ ಒಂದು ಹೇಳ್ತಿದ್ರು ಅದನ್ನೇ ಮಾಡ್ಬೆಕು. ನನ್ನ creativity ತೋರ್ಸಕ್ಕೆ ಆಗ್ತಿಲ್ವಲ್ಲ ಅಂತ ನಂಗೆ ಬೇಜಾರು.. ಆದ್ರೆ ನನ್ನ creativity ನೋಡೋ ಪರಿಸ್ಥಿತಿ ಬರ್ಲಿಲ್ವಲ್ಲ ಸಧ್ಯ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟ ಕೆಲವು ಜನರೂ [ನಮ್ಮ ಅಕ್ಕನಂತವರು] ಇದ್ರು[ಈಗ್ಲೂ ಇದಾರೆ] ಅಂತ ನನ್ನ ಭಾವನೆ... ಅರ್ಥನೇ ಇಲ್ದೇರೋ ಎನೇನೋ paint ಮಾಡ್ಸುದ್ರು ನನ್ನ ಕೈಯಲ್ಲಿ. ಅಥ್ವಾ ನನ್ನ ಕೈಯಿಂದನೇ ಈ ಅರ್ಥಹೀನತೆ ಉಂಟಾಗ್ತಿತ್ತೋ ಏನೊ.. or may be ಮೊದ್ಲೇ ಅರ್ಥ ಅಷ್ಟೊಂದು ಇರ್ತಿರ್ಲಿಲ್ಲ and ನನ್ನ ಕೈ ಬಲದಿಂದ ಅದಕ್ಕೆ ಇದ್ದಿದ್ ಸ್ವಲ್ಪ ಅರ್ಥನೂ ಹೊಟೊಗ್ತಿತ್ತು ಅನ್ಸತ್ತೆ.....

ಏನ್ ಮಾಡೋದು, ನಾವ್ ಹೇಳೋದು ಬೇರೇ ಅವ್ರ್ಗೆ ಅರ್ಥ ಆಗಲ್ಲ. ಪ್ರಪಂಚನೇ ಹಾಗೆ. ಅವ್ರ್ಗೆ ಅರ್ಥ ಮಾಡ್ಕೊಬೇಕು ಅನ್ನೋದೂ ಇರಲ್ಲ. ಅವ್ರ್ದೇ rules. ಆ rule ಯಾಕ್ followಮಾಡ್ಬೇಕು ಅಂತ ಪ್ರಶ್ನೆ ಮಾಡೊಹಾಗಿಲ್ಲ ಒಳ್ಳೆ loosಗಳ್ತರ ಆಡ್ಬಿಡ್ತಾರೆ..ಅದಕ್ಕೆ ನಾನು ಯಾರನ್ನೂ ಪ್ರಶ್ನೆ ಮಾಡೊದು ಬೇಡ ನನ್ನ ಪಾಡಿಗೆ ನನ್ಗೆ ಬೇಕ್ಕಾದು ಮಾಡ್ಕೊಂಡು ಇದ್ಬಿಡೋಣ ಅಂದ್ರೆ ಅದಕ್ಕೂ ಬಿಡಲ್ಲ. ಏನ್ ಜನಗಳೋ..ಏನ್ ಪ್ರಪಂಚನೋ...

ನಮ್ life ಒಂದು painting class ಥರನೋ ಅಥ್ವಾ painting ಥರನೋ ಅನ್ಬೋದು. ಅದಕ್ಕೆ ಅದ್ರದೇ ಆದ rules ಅಂತ ನಾವೇ ಮಾಡ್ಕೊಂಡು ಅದನ್ನ follow ಮಾಡಕ್ಕೆ ಆಗ್ದೆ ಒದ್ದಾಡ್ತೀವಿ. ಯಾವ್ brush ಅಲ್ಲಿ ಲೈನ್ ಎಳ್ಕೊಂಡ್ರುನೂ ಅದು ಲೈನೇ ಅಲ್ವೇ? ಆದ್ರೆ ಬೇರೆ ಬೇರೆ width ಅದೂ ಇದೂ change. ದುಡ್ಡಿರೋ ದೊಡ್ಡಪ್ಪರಿಂದ ಹಿಡ್ದು ದುಡ್ಡಿಲ್ದೇರೋ ಚಿಕ್ಕಪ್ಪಂದ್ರುವರ್ಗೂ [ಈ term ಯಾರ್ use ಮಾಡಿದಾರೋ ಹಿಂದೆ ಗೊತ್ತಿಲ್ಲ. ಮಾಡಿಲ್ಲ ಅಂದ್ರೆ ಬಿಡಿ. ನಾನೆ ಏನೋ logic use ಮಾಡಿ ಏನೋ ಬರ್ದಿದೀನಿ ಅಂತ ಅಂದ್ಕೊಂಬಿಡಿ] ಎಲ್ಲಾರೂ ಅವ್ರವ್ರ್ಗೆ afford ಮಾಡಕ್ಕೆ ಆಗೋ brushಗಳ್ ತೊಗೊಂಡು lines ಎಳ್ಕೊತಾರೆ. ಅವರವರು ಎಳ್ಕೊಂಡ lines cross ಮಾಡಕ್ಕೆ ಅವರವರಿಗೇ ಕಷ್ಟ. cross ಮಾಡಕ್ಕೆ ಆಗ್ದೇರೋತರ lines ಯಾಕ್ ಎಳ್ಕೊಬೇಕು ನಾವು? ಅಥ್ವಾ ಎಳ್ಕೊಂಡ್ಮೇಲೆ cross ಮಾಡ್ಬೆಕು ಅನ್ನೋ ಹುಚ್ಚು ಯಾಕೆ? ಅಥ್ವಾ ಅದು ಹುಚ್ಚಲ್ಲ ಅದೇ life ಅಂತನೋ? or atleast lifeದು ಒಂದು parto? ಎನೊ ಗೊತ್ತಾಗ್ತಿಲ್ಲ ಯಾರ್ಗೂ...


ಸರಿ painting class ಇಂದ ಎಲ್ಲೆಲ್ಲೋ ಹೊಟೋಯ್ತು.. painitng classoo ಎಲ್ಲೆಲ್ಲೋ ಹೊಟೊಯ್ತು ಅನ್ನೋದು next ಸಮಾಚಾರ. ಅವ್ರ್ಗಳ್ ಹೇಳ್ಕೊಡ್ತಿದ್ದ uninteresting ವಿಶ್ಯಗಳಿಂದ ಬೇಸತ್ತ ಬಡಜೀವ[ಅಂದ್ರೆ ನಂದು] ಒಂದ್ ದಿನ decide ಮಾಡ್ಬಿಡ್ತು[ಇದೆಲ್ಲಾ ಸ್ವಲ್ಪ dramatic effect ಇರ್ಲಿ ಅಂತಷ್ಟೆ actually ಏನೋ ಭಾರೀ ದೊಡ್ಡ ದೊಡ್ಡ ಜನ ಒಂದು ದಿನ decide ಮಾಡೊಹಾಗೆ ನಾನೇನು decide ಮಾಡ್ಲಿಲ್ಲ. gradual ಆಗಿ ಆಯ್ತು. ಅಥ್ವಾ ಅದು decison ಅಲ್ಲ "gradual realization" ಅಂತ ಅಂದ್ರೆ better ಇರ್ಬೋದು.] - " ಈ painting classಗೆ ನಾನಂತೂ ಇನ್ನೊಂದ್ಸಲಿ ಕಾಲ್ ಇಡಲ್ಲ" ಅಂತ.

ವಿಧಿ ವಿಲಾಸ ಅನ್ನೊಣ್ವೇ ಅಥ್ವಾ ಇನ್ನೇನಾದ್ರು termu ಇದ್ಯೋ? ಏನೋ ಒಂದು ಒಟ್ನಲ್ಲಿ ಬೋಧಿ ವೃಕ್ಷ ನನ್ನ ತಲೆ ಮೇಲೆ ಕಾಣ್ಸ್ತಾಇತ್ತು. ಇದ್ರು ಮಧ್ಯ ನಾನು ಮಾಡಿದ[ನಾನೇನ್ ಮಾಡಿದ್ದು ನನ್ನ ಕೈಯಲ್ಲಿ ಅವ್ರು ಮಾಡ್ಸಿದ್ದು] paintings ನೋಡಿ ನಾಗರಿಕರ ಹಿತರಕ್ಷಣಾ ವೇದಿಕೆ ಅವ್ರು ನಮ್ಮ ಮನೆ ಮುಂದೆ ಧರಣಿ ಸತ್ಯಾಗ್ರಹ ಬೇರೆ ಮಾಡಕ್ಕೆ ಶುರು ಮಾಡ್ಬಿಟ್ಟಿದ್ರು. ಅದು ಯಾವ ಸತ್ಯಕ್ಕಾಗಿ ಆಗ್ರಹ ಮಾಡ್ತಿದ್ರೋ ಗೊತ್ತ್ತಿಲ್ಲ..ಅದನ್ನ ಕೇಳೋ ದೈರ್ಯ ಮಾಡಕ್ಕೆ ಹೋಗ್ಲಿಲ್ಲ ನಾನು. ಸುಮ್ನೆ ಯಾಕೆ risk ಅಲ್ವಾ?
ಸರಿ ಇವೆಲ್ಲಾ factors ಗಮನದಲ್ಲಿ ಇಟ್ಕೊಂಡು ಅವತ್ತು ಬಿಸಾಕಿದ paint brush ಇವತ್ವರ್ಗೂ ಹಿಡ್ದಿಲ್ಲ ನಾನು. ಎಲ್ಲಿ ಬಿಸಾಕ್ದ್ನೋ ಯಾರ್ ತೊಗೊಂಡ್ರೋ ಅದ್ರಿಂದ ಅವರ ಗ್ರಹಗತಿಗಳಲ್ಲಿ ಏನೇನು change ಆಗಿದ್ಯೋ ಅಥ್ವಾ ಆ brushನ ಯಾರೂ ಎತ್ಕೊಳ್ಳೇ ಇಲ್ವೋ ಏನೂ ಗೊತ್ತಿಲ್ಲ..ಒಳ್ಳೆ shrouded mystery ಅಂತಾರಲ್ಲ ಹಂಗೆ ಆಗ್ಬಿಟ್ಟಿದೆ ಆ ವಿಷ್ಯ...


PS:ಈಗೀಗ ಯಾಕೋ ಮತ್ತೆ drawingo paintingo ಮಾಡೋಣ ಅನ್ಸ್ತಿದೆ.[ನಂ ಅಕ್ಕ ಈ ವಿಶ್ಯ ಕೇಳಿ ಬೇಡ ಕಣೊ ಅಂತ ದೈನ್ಯಪೂರ್ಣವಾಗಿ ಹೇಳ್ದ್ಲು- ಕೇಳ್ಕೊಂಡ್ಲು ಅಂದ್ರೆ more appropriate] ಯಾಕೋ ಗೊತ್ತಿಲ್ಲ. but ಹಂಗೆ ಮಾಡ್ಬಿಟ್ರೆ ಅವತ್ ನಾನ್ ಮಾಡಿದ್ದ ಪ್ರತಿಜ್ಞೆ ಮುರ್ದುಹೋಗತ್ತೆ ಅಂತ ಯೋಚ್ನೆ ಮಾಡ್ತಿದೀರಾ? ನೋಡಿ ನಾನು ಹೇಳಿದ್ದು "ಈ painting classಗೆ ನಾನಂತೂ ಇನ್ನೊಂದ್ಸಲಿ ಕಾಲ್ ಇಡಲ್ಲ" ಅಂತ. ಇಲ್ಲಿ keyword "ಈ". ನಾನೇನು "ಈ painting ಅನ್ನೋದ್ರಲ್ಲಿ ಇನ್ನೊಂದು ಸಲಿ ಕೈ ಹಾಕಲ್ಲ" ಅಂತ ಹೇಳಿಲ್ವಲ್ಲ. so painting ನನ್ನ ಪಾಡಿಗೆ ನಾನು ಮಾಡ್ಕೊಳಕ್ಕೆ ಯಾರ್ದೂ ಅಭ್ಯಂತರ ಇರ್ಬಾರ್ದು technically speaking. ಏನೇ ಆದ್ರುನೂ ಈ ವಿಷ್ಯನ ದಯವಿಟ್ಟು ಯಾರ್ಗೂ ಹೆಳ್ಬೇಡಿ....