A Soldier of Art

Tuesday, August 29, 2006

20th may 2006

20th may was a very special day for me.....

ಅವತ್ತು ಏನ್ ಆಯ್ತು ಅಂತ ಹೇಳ್ತೀನಿ ಕೇಳಿ....
ನಾವೆಲ್ಲಾ- ನಮ್ಮ college music team- ನಮ್ಮ ಕೊನೆಯ performance in the college ಮುಗುಸ್ಕೊಂಡು coffeedayಗೆ ಹೋದ್ವಿ- ಬಸವನಗುಡಿ branchಗೆ....ಸರಿ ಎಲ್ಲಾ normal ಆಗಿ ನಕ್ಕೊಂಡು, ಮಾತಾಡ್ಕೊಂಡು ಇದ್ವಿ....ಆಗ suddenಆಗಿ ನಮ್ಮ ಮಯೂರ ಜೋ....ರಾಗಿ ಅಳಕ್ಕೆ ಶುರು ಮಾಡ್ಬಿಟ್ಟ- ಗೊಳೋ ಅಂತ-ಸರಿ ನಾವೆಲ್ಲ ಏನ್ ಆಯ್ತೋ ಅಂತ ಕೇಳಕ್ಕೆ ಮೊದ್ಲೇ ಆ coffeday ಅವ್ರೆಲ್ಲಾ ಸುಮ್ನಿರ್ಬೆಕೊ ಬೆಡ್ವೋ ಬಂದುಬಿಟ್ರು ದೊಡ್ಡದಾಗಿ, ಒಳ್ಳೆ order ತೊಗೊಳಕ್ಕೂ ಇಲ್ದೆರೋ ಉತ್ಸಾಹದಲ್ಲಿ...ಬಂದವ್ರೇ "ಏನ್ ಆಯ್ತು" "ಏನ್ ಆಯ್ತು" ಅಂತ ಕೇಳಕ್ಕೆstart ಮಾಡ್ದವ್ರು ನಿಲ್ಲಿಸ್ತನೇ ಇಲ್ಲ...ಅವ್ನು ಏನ್ ಹೆಳ್ತಾನೆ ಕೇಳೋಣ ಅನ್ನೊ ತಾಳ್ಮೆನೂ ಇಲ್ಲ ಅವ್ರ್ಗೆ....ನನಗೆ full shock ಯಾಕೆ ಈ ಮಹರಾಯ ಈತರ ಅಳಕ್ಕೆ ಶುರು ಮಾದ್ಬಿಟ್ಟ ಅಂತ....ಎಲ್ಲಾರೂ ಕೆಳ್ದ್ಮೇಲೆ,ಈಗ ಮಯೂರ ಎನೋ ಹೇಳ್ತಾನೆ ಅಂತ ಅನ್ಸ್ತು...ಎಲ್ಲಾರೂ ಏನ್ ಹೇಳ್ತಾನೆ ಅಂತ ಕಾತುರಾಕೌತುಕರಾಗಿ ಕೇಳಕ್ಕೆ ಸಿಧ್ದರಾದ್ವಿ....

ನೋಡ್ದ್ರೆ ಮಯೂರ ನನ್ನ ಕಡೆ ಕೈ ತೋರ್ಸ್ಬಿಟ್ಟ ಕಳ್ಳ...ನಾನು ಮೊದ್ಲೇ shocked state ಅಲ್ಲಿದ್ದೆ. ಈಗ super shock ಆಗೋಯ್ತು...ನಾನು ಕಣ್ ಮುಚ್ಚಿ ಕಣ್ ತೆಗ್ಯೋದ್ರಲ್ಲಿ ಎಲ್ಲಾರೂ ನನ್ನ ಕಡೆ ಓಡ್ಬರ್ತಿದಾರೆ.....ನನಗೆ ಗೊತ್ತಾಯ್ತು ಎಲ್ಲಾರೂ ಹೊಡ್ಯಕ್ಕೆ ಬರ್ತಿದಾರೆ ಅಂತ. shocked state ಅಲ್ಲಿದ್ದ ನನಗೆ ಜೀವಭಯ ಅನ್ನೋದು ಇದ್ದಿದ್ರಿಂದ ಆ state ಇಂದ ಆಚೆ ಬರಕ್ಕೆ ಸಹಾಯ ಆಯ್ತು....ಆಗ ಅಂದ್ಕೊಂಡೆ ಜೀವಭಯ ಎಷ್ಟು important ಅಂತ....

ಸರಿ ನಾನು ಓಡಕ್ಕೆ ಶುರು ಮಾಡ್ದೆ...coffeeday ಒಳ್ಗೇನೇ ಓಡಕ್ಕೆ ಶುರು ಮಾಡ್ದೆ...ಬೇರೆ ಎಲ್ಲೂ ಜಾಗ ಇರ್ಲಿಲ್ವಲ್ಲ ಅದಕ್ಕೆ....full speed ಅಲ್ಲಿ ಓಡ್ತಿರ್ಬೇಕಾದ್ರೆ ಅನಾಹುತಗಳ್ ಆಗೋದ್ರಲ್ಲಿ ಆಶ್ಚರ್ಯ ಎನೂ ಇಲ್ಲ...ಅದಕ್ಕೇ road safety ಬಗ್ಗೆ ಅಷ್ಟೊಂದು ಪ್ರಚಾರಗಳೆಲ್ಲಾ ಆಗ್ತಿದೆ ಈಗ...ಸುಮ್ನೆ ನಾವು ಖುಶಿ ಆಗತ್ತೆ ಅಂತ fastಆಗಿ ಗಾಡಿ ಓಡ್ಸ್ಕೊಂಡು ಹೋದ್ರೆ ಖಂಡಿತ್ವಾಗ್ಲೂ ಭಗವಂತನ್ ಪಾದ ಸೇರೋದ್ರಲ್ಲಿ doubtE ಇಲ್ಲ. "thrill kills" "ನಿದಾನವೇ ಪ್ರಧಾನ" ಇತ್ಯಾದಿ slogansನ ಹಾಕಿರ್ತಾರೆ ನಂ roadಗಳಲ್ಲಿ...ಜನ ಅದನ್ನ serious ಆಗಿ ತೊಗೋಬೇಕು ಅಷ್ಟೇ...ನಾನಂತೂ 40-50kmph ಮೇಲೆ ಹೊಗೋದೇ ಇಲ್ಲ ನನ್ನ ಗಾಡಿಲಿ...ಆದ್ರೆ coffeeday road ಅಲ್ಲ ಹಾಗು ನನ್ ಹತ್ರ ಗಾಡಿನೂ ಇರ್ಲಿಲ್ಲ..ಹಾಗೂ ಜೀವಭಯ ಅನ್ನೊದು ಬೇರೆ ಇತ್ತು.. so ಅಲ್ಲಿ full speedಲ್ಲಿ ಓಡ್ತಾಇದೀನಿ...ರಾಮಾಯಣದಲ್ಲಿ ಹನುಮಂತ and party ಹಿಂಗೇ party ಮಾಡ್ತಿದ್ದು ಮರದಿಂದ ಮರಕ್ಕೆ ಜಿಗಿದು ಅಂತ ನಮ್ ಅಜ್ಜಿ ಹೇಳಿದ್ ಕತೆ ನಾಪ್ಕಕ್ಕೆ ಬಂತು ಆಗ........

ಸರಿ ಹನುಮಂತನ ಪರಮ ಭಕ್ತನ್ತರ ನಾನು table ಇಂದ tableಗೆ ಜಿಗೀತಿದ್ದೆ.. ಬೇರೆ customers ಎಲ್ಲಾ ನೊಡ್ತಿದ್ರು ಎನೋ matrix filmದು shooting ನೋಡ್ತಿರೊತರ ಮುಖಭಾವನೆಗಳೊಂದಿಗೆ..ಮದ್ಯದಲ್ಲಿ "wow" "wow"ಗಳು ಬೇರೆ... ಏನ್ಮಾಡ್ತಾರೆ ಅವ್ರ್ತಾನೆ ಬಿಡಿ....ಈ ನನ್ನ ಜಿಗಿತಗಳ ಭರದಲ್ಲಿ ಒಂದೆರಡು ಲೋಟಗಳು ಕೆಳ್ಗೆ ಬಿದ್ದು ಒಡ್ದುಹೋದ್ವು...ಆಗ ಮಯೂರ ಇನ್ನೂ ಜೋರಾಗಿ ಅಳಕ್ಕೆಶುರು ಮಾಡ್ದ[ಲೋಟ ಬಿದ್ದಿದ್ದಕ್ಕೆ ಅಂತ ನಾನ್ ಅಂದ್ಕೊಂಡೆ]...ಆಗ matterru ಸ್ವಲ್ಪ serious ಆಯ್ತು. chase ಜಾಸ್ತಿ intense ಆಯ್ತು..ನಾನೂ ಸ್ವಲ್ಪ ಜಾಸ್ತಿ speedಅಲ್ಲಿ ಓಡಕ್ಕೆ ಶುರು ಮಾಡ್ದೆ.. ಈ chase ತುಂಬಾ ಹೊತ್ತು ನಡೀತು and surprisingly ಈಗ ಮಯೂರ ಅಳು ನಿಲ್ಸಿದ್ದ..ಆದ್ರೆ ದುರ್ದೈವವಷಾತ್ ಯಾರೂ ಅದನ್ನ ಗಮನಿಸಿರ್ಲಿಲ್ಲ...ನೋಡಿ ಎಂತ ಜನ... ತಾವು ಮಾಡ್ತಿದ್ದ ಕೆಲಸಕ್ಕೆಮೂಲ ಪ್ರೇರಣೆಯಾದ "ಮಯೂರನ ಅಳು" ನಿಂತದ್ದೂ ಅವ್ರ್ಗೆ ಕೆಳಿಸ್ಲಿಲ್ಲ..ಇಲ್ಲಿ ನಾವು ಕಲೀಬೇಕಾಗಿರೋ ಜೀವನದ ಬಹು ಮುಖ್ಯ ಪಾಠ್ಗಳು ಅಡಗಿವೆ... ನಾವು ಮಾಡೊ ಕೆಲಸಕ್ಕೆ ಎನಾದ್ರೂ ಅರ್ಥ ಇನ್ನೂ ಇದ್ಯೋ ಇಲ್ವೋ ಅನ್ನೋದನ್ನ ಆಗಾಗ -ಅಂದ್ರೆ periodically- check ಮಾಡ್ಕೊಬೇಕು ನಾವು.. ಎಲ್ರಿಗೂ ನನ್ನನ್ನ ಹಿಡಿದು ಹೊಡೆದು ಮಯೂರನ್ ಖುಷಿಗೆ ಅಥ್ವಾ ಕೃಪಾಕಟಾಕ್ಷಕ್ಕೆ ಪಾತ್ರರಾಗ್ಬೇಕು ಅನ್ನೋ ತವಕ,ಉತ್ಸಾಹ...ಮಯೂರ ಆ areaಲಿ ತುಂಬಾನೇ famous..mostly ಅದಕ್ಕೇ ಇರ್ಬೇಕು ಎಲ್ರೋ ಅವನನ್ನ please ಮಾಡಕ್ಕೆ ಎನ್ ಬೇಕಾದ್ರೂ ಮಾಡಕ್ಕೆ ready ಆಗಿದ್ದ ಹಾಗಿತ್ತು.....

ನಂಗೂ ಸುಸ್ತು ಆಗಕ್ಕೆ ಶುರು ಆಯ್ತು.."ನಾರಾಯಣಾ ವಾಸುದೇವಾ" ಅಂತ ಮನಸಲ್ಲೇ ಅಂದ್ಕೊಂಡು ಎಷ್ಟು ಆಗತ್ತೋ ಅಷ್ಟು ಓಡ್ತಾಇದ್ದೆ... ಕೊನೆಗೆ ಇನ್ನು ಓಡಕ್ಕೆ chanse ಇಲ್ಲ ಅನ್ಸ್ದಾಗ ದೇವರ ರೂಪದಲ್ಲಿ ನಮ್ಮ ಅಮಿತ್ ಓಡೋಡಿ ನನ್ ಹತ್ರ ಬಂದ[ಇಷ್ಟು ಹೊತ್ತೂ ಅವ್ನು ಎಲ್ಲಿದ್ದ ಅನ್ನೋದು ಯಾರ್ಗೂ ಗೊತ್ತಿರ್ಲಿಲ್ಲ ಅನ್ನೋದು ನನ್ನ ಭಾವನೆ] ಸರಿ ಅವ್ನು ಬಂದವ್ನೇ ನನ್ನ ಎಳ್ಕೊಂಡು ಹೋಗಿ ನನ್ನ ಗಾಡಿಯಲ್ಲೇ ಕರ್ಕೊಂಡು ಹೊಟೋದ[ಅವನಿಗೆ ನನ್ನ ಗಾಡಿಯ key ಹೇಗೆ ಸಿಕ್ತೋ ಅನ್ನೊದು ಆ ದೇವ್ರೇ ಬಲ್ಲ... may be ಆ ದೇವ್ರೇ ಅದನ್ನ ನನ್ನ ಜೇಬಿಂದ ಕದ್ದು ಅವನ ಕೈಗೆ ಕೊಟ್ಟಿರ್ಬೇಕು because ಅಮಿತ್ ಕದ್ದಿರಕ್ಕೆ chanse ಇಲ್ಲ...]
ಎನೇ ಹೇಳಿ he saved me....ಅವ್ನು ದೊಡ್ಡ ಮನುಷ್ಯ.... il always be greatful to him ....


ನಾನು ಗಾಡಿ ಮೇಲೆ ಕೂತ್ಕೊಂಡು ನೆಮ್ಮದಿಯ ನಿಟ್ಟುಸಿರು ಬಿಡೋಣ ಅನ್ನೋಅಷ್ತ್ರಲ್ಲಿ ಗೊತ್ತಾಯ್ತು ನನ್ನ ಗಾಡಿ ಓಡ್ಸ್ತಾಇರೋದು ಅಮಿತ್ ಅಂತ....ಯಾವತ್ತೂ 50ರ ಮೇಲೆ ಹೋಗದ ನನ್ನ ಬಡಪಾಯಿ ಗಾಡಿ ಇವತ್ತು 80ರಲ್ಲಿ ಭರ್ ಅಂತ ಹೋಗ್ತಾಇದೆ.. ಸುತ್ತಲಿನ ಪ್ರಪಂಚ ನನಗೆ ಸರ್ಯಾಗಿ ಕಾಣ್ಸ್ತಾನೂ ಇಲ್ಲ...ಅಮಿತನ ಗಾಡೀ ಓಡಿಸೊ ಶೈಲಿಯ ಬಗ್ಗೆ ಕೇಳಿದ್ದುಂಟು..ಆದ್ರೆ ಅವತ್ತು ಪ್ರತ್ಯಕ್ಷವಾಗಿ ನೋಡ್ತಾಇದ್ದೆ[actually ನೋಡಕ್ಕೂ ಆಗ್ತಿರ್ಲಿಲ್ಲ. ಅವ್ನು ಅಷ್ಟು fast ಆಗಿ ಹೋಗ್ತಿದ್ದ] ನನ್ನ ಗಾಡಿಯ ಮೇಲಿನ ಪ್ರೀತಿಯಿಂದ ನನ್ನ ಬಾಯಿಂದ ಹೊರಟ ಕೆಲವು "ಅಯ್ಯೋ" ಗಳು ಯಾರ ಕಿವಿಗೂ ಬೀಳಲಿಲ್ಲ.. atleast ಅಮಿತನ ಕಿವಿಗಂತೂ ಬೀಳಲಿಲ್ಲ....ಒಂದು ಮುಗುದ್ರೆ ಇನ್ನೊಂದು ಶುರು ಆಯ್ತು".ದೇವ್ರೇ" ಅಂದ್ಕೊಂಡು ಇದ್ದ ಬದ್ದ ಶಕ್ತಿ ಎಲ್ಲಾ ಸೇರ್ಸ್ಕೊಂಡು ಜೋರಾಗಿ ಅಮಿತ್ನ ಕರ್ದೆ...ದೇವರ ದಯೆಯಿಂದ ಅವ್ನ್ಗೆ ಕೆಳ್ಸ್ತು....ಅಲ್ಲೆ side ಅಲ್ಲಿ ಗಾಡಿ ನಿಲ್ಸಕ್ಕೆ ನಾನು ಹೆಳ್ದೆ....ಅವ್ನು ಸದ್ಯ ನಿಲ್ಲಿಸ್ದ ಪುಣ್ಯಾತ್ಮ.......


ಗಾಡಿ ನಿಲ್ಲಿಸಿದ ಮೇಲೆ ನಾನು ಅಮಿತ್ಗೆ ನನ್ನ ಧನ್ಯವಾದಗಳ್ನ ತಿಳಿಸಿ ತಾವು ದೇವರ ದೂತರು ಅದೂ ಇದೂ ಅಂತ ಏನೇನೋ ಹೆಳ್ದೆ....ಅಮೇಲೆ ಅವನನ್ನ ಮನೆಗೆ ಕಳ್ಸಿ ಅಲ್ಲೇ ಸ್ವಲ್ಪ ಹೊತ್ತು ಕೂತ್ಕೊಂಡೆ ಸುಧಾರ್ಸ್ಕೊಳ್ಳೋಣ ಅಂತ....
ಅವತ್ತು ಸಂಜೆ ನಡೆದ ಅವಾಂತರದ ಬಗ್ಗೆ ಯೋಚಿಸ್ತಾ ಕೂತ್ಕೊಂಡಿದ್ದ ನನಗೆ ನನ್ನ cell phone ಬಡ್ಕೊತಾಯಿದೆ ಅಂತ realize ಆಗೋದ್ರಲ್ಲಿ ಎರಡು ನಿಮಿಷ ಬೇಕಾಯ್ತು....ಸರಿ ಅಂತ phone ತೊಗೊಂಡೆ... ಮನೆಯಿಂದ phone ಅಂದ್ಕೊಂಡು ಇನ್ನೇನು ತೆಗೀಬೇಕು ಆಗ ......ಅಲ್ಲಿ ಬರ್ತಾಇದ್ದ ಹೆಸರು....ಅದೇ ಹೆಸರು...ಹೌದು ಅದೇ ಹೆಸರು...ಅವತ್ತು ಸಂಜೆ ಆದ ಅವಾಂತರಗಳಿಗೆ ಕಾರಣೀಭೂತನಾದಂತಹ[ಬರೀ ಭೂತ ಅನ್ಬೋದಿತ್ತು.... ಆದ್ರೆ ಬೇಡ ಬಿಡಿ] ಮಯೂರನ ಹೆಸರು ನನ್ನ cell ತೋರ್ಸ್ತಾಇತ್ತು...ಆ ಹೆಸರು ನೊಡಿದ್ದೊಂದೆ ನಾಪ್ಕ..ಆಮೇಲೆ ನನಗೆ ಏನ್ ಆಯ್ತು ಅಂತ ಗೊತ್ತಿಲ್ಲ...........


PS: ನಾನು ಎದ್ದಾಗ ನಮ್ಮ music team ಅವ್ರೆಲ್ಲಾ ಸುತ್ಲೂ ಇದ್ರು..coffeday employeesoo ಇದ್ರು...ಮಯೂರನೂ ಇದ್ದ..ಅವನ ಹೆಸರುಮಾತ್ರವೇ ನೋಡಿ ಮೂರ್ಛೆ ಹೋಗಿದ್ದ ನನಗೆ ಅವನನ್ನ ಪ್ರತ್ಯಕ್ಷ ನೋಡ್ದಾಗ ಎನೂ ಅನ್ಸ್ಲಿಲ್ಲ...ಭಯನೂ ಆಗ್ಲಿಲ್ಲ,ಕೋಪಾನೂ ಬರ್ಲಿಲ್ಲ....may be ನಾನು ಮೂರ್ಛಾಹೀನಾವಸ್ತೆಯಲ್ಲಿ ಕಳೆದ ಒಂದೂವರಘಂಟೆ ನನ್ನ ಮನಸ್ಸಿನಲ್ಲಿದ್ದ ಎಲ್ಲಾ emotionsನೂ ದೂರ ಮಾಡ್ಬಿಟ್ಟಿತ್ತು ಅನ್ಸತ್ತೆ...ನಿದ್ದೆ ಮನುಷ್ಯನ ಎಷ್ಟೋ ಯೋಚನೆಗಳನ್ನ, ದುಗುಡ ದುಮ್ಮಾನಗಳನ್ನ ದೂರ ಮಾಡ್ಬಿಡತ್ತೆ...ಅದಕ್ಕೇ ಇರ್ಬೇಕು ಒಂದೊಂದ್ಸಲಿ ಚಿಕ್ಕ ಮಕ್ಳು ಅಳ್ತಿದ್ರೆ ದೊಡ್ಡವ್ರು ಹೇಳೋದು "ನಿದ್ದೆ ಬಂದಿದೆ ಅದಕ್ಕೆ..ಒಂದು ಎರಡು ಘಂಟೆ ನಿದ್ದೆ ಮಾಡಿದ್ರೆ ಎಲ್ಲಾ ಸರಿ ಹೋಗತ್ತೆ" ಅಂತ..ನಿದ್ದೆಯಿಂದ ಎದ್ದ ಮಕ್ಳು ಮತ್ತೆ ತಮ್ಮ ಚೇಷ್ಟೆಗಳನ್ನ resume ಮಾಡ್ಕೊಳ್ಳೊದು, ಆರಾಮ್ವಾಗಿ ಆಟ ಆಡ್ಕೊಂಡು ಖುಶಿಯಿಂದ ಇರೋದು ಸರ್ವೇ ಸಾಮಾನ್ಯವಾದ ವಿಷ್ಯ...

ಸರಿ ಎಲ್ಲರ್ನೂ ಒಂದ್ಸಲಿ ನೋಡಿ ಒಂದು nervous smile ಕೊಡಕ್ಕೆ ಪ್ರಯತ್ನ ಪಟ್ಟೆ...ಆಮೇಲೆ ಸ್ವಲ್ಪ ಹೊತ್ತು ಆದ್ಮೇಲೆ ಗೊತ್ತಾಯ್ತು..ಮಯೂರ ಅತ್ತಿದ್ದು ನನ್ನ ಹಿಂದೆ ಇದ್ದ ಒಂದು ಜಿರಳೆಯನ್ನು ನೋಡಿ ಅಂತ...ಲೋಟ ಬಿದ್ದಾಗ ಗಾಬರಿಗೊಂಡ ಜಿರಳೆಯನ್ನು ನೋಡಿ ನಮ್ಮ ಮಯೂರನಿಗೂ ಗಾಬರಿ ಆಗಿದೆ ಅದಕ್ಕೆ ಮಧ್ಯದಲ್ಲಿ ಜೋರಾಗಿ ಅತ್ತಿದ್ದು ಅವ್ನು...ಛೆ ಎಷ್ಟು ಅನಾಹುತಗಳಾಯ್ತು ನೋಡಿ ಒಂದು ಜಿರಳೆಯಿಂದ...ಆದ್ರೆ ಅವ್ನು ಅಳು ನಿಲ್ಸಿದ್ದು ಯಾಕೆ ಅನ್ನೋದು ಇನ್ನೂ ನನಗೆ ಗೊತ್ತಾಗಿಲ್ಲ...ಅದರ ಬಗ್ಗೆ ಅವನನ್ನ ಕೇಳೋ ಧೈರ್ಯ ನನಗಂತೂ ಇಲ್ಲ...ಅವ್ನೂ ಅದರ ಬಗ್ಗೆ ಹೇಳಿಲ್ಲ.........

20th may was indeed a very special day for me........and now u know why.....

please note: ಮಯೂರ ಹಾಗು ಅಮಿತ್ ಅಂತ ಸ್ನೇಹಿತರು ನನಗೆ ಇದ್ದಾರೆ....ಆದ್ರೆ ಇದು ಒಂದು ಕಥೆ ಅಷ್ಟೆ...ಇದರಲ್ಲಿ ಅವರ ಪಾತ್ರ ಎನೂ ಇಲ್ಲ?..ನನಗೆ ಹೊಳೆದ ಕೆಲವು ವಿಷ್ಯಗಳನ್ನ ಇಲ್ಲಿ ಕಥೆಯಾಗಿ ಹೇಳಿದೀನಿ ಹಾಗೂ ಅವರಿಬ್ಬರ ಹೆಸರುಗಳ್ನ ಬಳ್ಸ್ಕೊಂಡಿದೀನಿ ಅಷ್ಟೆ....ಆದ್ರೂ ಅವರಿಬ್ಬರ ವ್ಯಕ್ತಿತ್ವಗಳ ಛಾಯೆ ಇಲ್ಲನ ಪಾತ್ರಗಳಲ್ಲಿ ಇಲ್ವೇ ಇಲ್ಲ ಅಂತೇನೂ ಅಲ್ಲ...